ಕನ್ನಡದ ಜನಪ್ರಿಯ ಕಾದಂಬರಿಕಾರ ಎಸ್. ಎಲ್. ಭೈರಪ್ಪ ಅವರ ಹೊಸ ಕಾದಂಬರಿ ಉತ್ತರ ಕಾಂಡ. ಮಹಾಭಾರತದ ವಾಸ್ತವ ಚಿತ್ರಣ ನೀಡುವ 'ಪರ್ವ' ಕಾದಂಬರಿ ರಚಿಸಿದ್ದ ಭೈರಪ್ಪನವರು ಈಗ ರಾಮಾಯಣದ 'ಉತ್ತರಕಾಂಡ'ದ ವಸ್ತುವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ರಾಮಾಯಣದ ದ್ವಿತೀಯಾರ್ಧ ಅಂದರೆ ರಾಮನು ರಾವಣನನ್ನು ಯುದ್ಧದಲ್ಲಿ ಸೋಲಿಸಿ ಅಯೋಧ್ಯೆಗೆ ಮರಳಿದ ನಂತರ ನಡೆಯುವ ಪ್ರಸಂಗಗಳು ವಾಲ್ಮೀಕಿ ಕವಿಯ ಉತ್ತರಕಾಂಡದಲ್ಲಿವೆ. ಭೈರಪ್ಪನವರು ಕೂಡ ಆ ಭಾಗವನ್ನು ಕಥೆ ಹೇಳುವುದಕ್ಕಾಗಿ ಆಯ್ಕೆ ಮಾಡಿಕೊಂಡಿದ್ದಾರೆ. ಅಯೋಧ್ಯೆಯಲ್...