'ಪರ್ವ' ಕಾದಂಬರಿಯ ನಂತರ ಪ್ರಕಟವಾದ ಭೈರಪ್ಪನವರ ಕಾದಂಬರಿ 'ನೆಲೆ'. ಸಹಜವಾಗಿಯೇ ಈ ಕಾದಂಬರಿಯು 'ಪರ್ವ'ದ ಗಾಢ ನೆರಳಿನ ಅಂಚಿನಲ್ಲಿಯೇ ಸುತ್ತುತ್ತದೆ. ಕಾಮ ಮತ್ತು ಸಾವು ಬದುಕಿನಲ್ಲಿ ವಹಿಸುವ ಪಾತ್ರವನ್ನು ಈ ಕಾದಂಬರಿಯು ಚಿತ್ರಿಸುತ್ತದೆ. ಕಾಳಪ್ಪ ಮತ್ತು ಜವರಾಯಿ 'ನೆಲೆ' ಕಾದಂಬರಿಯ ಪ್ರಮುಖ ಪಾತ್ರಗಳು. ಮದುವೆಯಾಗಿದ್ದರೂ ಮದುವೆಯ ಸಂಸ್ಥೆಯನ್ನು ತಮಗೆ ಬೇಕಾದ ಹಾಗೆ ತಿರುಚುವ ಕುಮಾರ ಮತ್ತು ಮಾಲತಿಯರ ಕುಟುಂಬದ ವ್ಯಾಖ್ಯಾನವು ಮೌಲ್ಯಾತ್ಮಕ ನಿಲುವನ್ನು ಸೂಚಿಸುತ್ತದೆ. ನರ್ಸ್ ಪಾರ್ವತಮ್ಮ ಮತ್ತು ...