ಪ್ರಸಿದ್ದ ಕಾದಂಬರಿಕಾರರಾದ ಎಸ್. ಎಲ್. ಭೈರಪ್ಪನವರು ತಮ್ಮ ಹದಿನೆಂಟನೆಯ ವಯಸ್ಸಿನಲ್ಲಿ 'ಭೀಮಕಾಯ' ಕಾದಂಬರಿಯನ್ನು ಬರೆದಿದ್ದಾರೆ. ಹೆಸರೇ ಹೇಳುವಂತೆ ಕಾದಂಬರಿಯಿರುವುದು ಒಬ್ಬ ಕುಸ್ತಿಪಟುವಿನ ಜೀವನದ ಬಗ್ಗೆ. ಕುಸ್ತಿಪಟುವಿನ ಜೀವನಕ್ರಮ, ಅವರ ಅಭ್ಯಾಸಗಳು, ಸಾಧನೆಗಳು, ಅದಕ್ಕಾಗಿ ಅವರು ಪಡುವ ಶ್ರಮ, ಅವರಿಗಿರಬೇಕಾದ ಏಕಾಗ್ರತೆ, ಅವರ ಸಹಪಟುಗಳು ಅವರನ್ನು ನೋಡುವ ರೀತಿ, ಕೊಡುವ ಪ್ರೋತ್ಸಾಹ, ಕುಸ್ತಿಪಟುವಿನ ಆಹಾರಕ್ರಮ, ಮನೋದಾರ್ಢ್ಯತೆ, ಗುರುವಿನ ಬಗೆಗಿನ ಅಗಾಧವಾದ ಭಕ್ತಿ, ಕಿರಿಯಪಟುಗಳ ಬಗೆಗಿನ ...