ಪ್ರಮುಖ ಕಾದಂಬರಿಕಾರ, ಚಿಂತಕರಾದ ಎಸ್.ಎಲ್. ಭೈರಪ್ಪನವರ 'ಅಂಚು' ಕಾದಂಬರಿಯು 1990ರಲ್ಲಿ ರಚನೆಯಾಗಿದೆ.
ಜೀವನಪ್ರೀತಿ ಮತ್ತು ಸಾವಿನ ಪ್ರಪಾತಗಳ ಅಂಚಿನಲ್ಲಿ ನಿಂತಿರುವ ವ್ಯಕ್ತಿಯನ್ನು ತನ್ನತ್ತ ಸೆಳೆದುಕೊಳ್ಳಲು ಬೇಕಾದ ಪ್ರೀತಿಯು ಈ ಕ್ರೌರ್ಯಕ್ಕೆ ವಿರುದ್ಧ ತೂಕವನ್ನು ಸೃಷ್ಟಿಸುತ್ತದೆ. ಈ ಸ್ಥೂಲವಸ್ತುವಿನ ಹಂದರದಲ್ಲಿ ಸ್ಫುಟವಾಗಿ ನಿಲ್ಲುವ ಪಾತ್ರಗಳು, ಮಾನವ ಸನ್ನಿವೇಶಗಳು ಹಾಗೂ ಮನಃಪ್ರವೃತ್ತಿಯ ಗುಹ್ಯಸ್ಥಾನಗಳಿಗೆ ಟಾರ್ಚ್ ಹಾಕಿ ತೋರಿಸುವ ತಂತ್ರವಿಶ್ಲೇಷಣೆಗಳಿಂದ ಬೈರಪ್ಪನವರು ಈ ಕಾದಂಬರಿ...