ಬ್ರಿಟಿಷರಿಗೆ ಸಿಂಹಸ್ವಪ್ನವಾಗಿದ್ದ ಟಿಪೂ ಕನಸುಗಾರ ದೊರೆ. ಅವನು ತಾನು ಕಂಡ ಕನಸುಗಳನ್ನು ಟಿಪ್ಪಣಿ ರೂಪದಲ್ಲಿ ಬರೆದಿಟ್ಟಿದ್ದ, ಅದು ಪುಸ್ತಕ ರೂಪದಲ್ಲಿ ಪ್ರಕಟವಾಗಿದೆ.ಭಾರತಕ್ಕೆ ಸ್ವಾತಂತ್ರ್ಯ ದೊರೆತ ಸ್ವರ್ಣ ಮಹೋತ್ಸವ ವರ್ಷದಲ್ಲಿ ಬಿಬಿಸಿಯು ಗಿರೀಶರಿಗೆ ನಾಟಕ ಬರೆಯುವಂತೆ ಕೋರಿದಾಗ ಅವರು ಟಿಪೂವನ್ನು ವಸ್ತುವಾಗಿ ಆಯ್ಕೆ ಮಾಡಿಕೊಂಡರು. ಟಿಪೂವಿನ ಕನಸುಗಳನ್ನು ನಾಟಕವಾಗಿಸಿದರು. ಓದು ಕೃತಿಯಾಗಿ ಯಶಸ್ವಿಯಾದ ಈ ನಾಟಕ ರಂಗದ ಮೇಲೆಯೂ ಮುಖ್ಯವಾಗಿತ್ತು.ಗಿರೀಶ ಕಾರ್ನಾಡ್ ಅವರ ನಾಟಕ 'ಟಿಪ್ಪು ಸುಲ...