ಗಿರೀಶ ಕಾರ್ನಾಡರ ಅತ್ಯಂತ ಜನಪ್ರಿಯ ಮತ್ತು ಮಹತ್ವದ ರಂಗಕೃತಿ 'ತುಘಲಕ್;. ಭಾರತೀಯ ರಂಗಭೂಮಿಯಲ್ಲಿಯೇ ಈ ನಾಟಕಕ್ಕೆ ವಿಶೇಷ ಸ್ಥಾನ ಇದೆ. ಹಲವು ಭಾರತೀಯ ಭಾಷೆಗಳಿಗೆ ಅನುವಾದ ಆಗಿರುವ ಈ ಕೃತಿಯು ರಂಗಕ್ರಿಯೆ-ತಾತ್ವಿಕತೆ-ಕಟ್ಟಿರುವ ಕ್ರಮದ ಕಾರಣದಿಂದಾಗಿ 'ಮಾಸ್ಟರ್ ಪೀಸ್' ಎಂದು ಗುರುತಿಸಲಾಗುತ್ತದೆ. ಮಧ್ಯಕಾಲೀನ ಭಾರತದ ಕನಸುಗಾರ ದೊರೆ ಮಹ್ಮದ್ ಬಿನ್ ತುಘಲಕ್ ಈ ನಾಟಕದ ವಸ್ತು. ಐತಿಹಾಸಿಕ ವಸ್ತುವನ್ನು ಆಯ್ಕೆ ಮಾಡಿದ ಗಿರೀಶ್ ಅವರು ಅದನ್ನು ಆಧುನಿಕ ಸಂವೇದನೆಗೆ ಒಗ್ಗಿಸಿದ ರೀತಿ ಮಾತ್ರ ಅನನ್ಯ. ...