ತಮ್ಮ ಮಾತಿನ ಬಾಣದಿಂದ ನಮ್ಮನ್ನೆಲ್ಲ ನಕ್ಕು ನಗಿಸುವ ಗಂಗಾವತಿ ಪ್ರಾಣೇಶ್ ಅವರು ತಮ್ಮ ಅಗಾಧ ತಿರುಗಾಟ, ಸಮಾಜದ ಜೊತೆಗಿನ ಒಡನಾಟ ಮತ್ತು ಓದನ್ನು ಬರಹಕ್ಕೆ ಇಳಿಸಿದಾಗ ಹುಟ್ಟಿದ ಕೃತಿಗಳಲ್ಲೊಂದು ""ನಕ್ಕರೆ ಅಕ್ಕರೆ"". ಬದುಕಿನ ಜಂಜಡಗಳ ನಡುವೆ ಬದುಕಿಗೆ ಬೇಕಿರುವ ಸ್ಪೂರ್ತಿ ತುಂಬುವ ಟಾನಿಕ್ ಇಲ್ಲಿನ ಬರಹಗಳಲ್ಲಿದೆ.