ಕೈಲಾಸಂ ಅವರ ಮಾತು; ಜೀವನದಲ್ಲಿ ನಡೆಯೋ ಘಟನೆಗಳನ್ನು ವಕ್ರದೃಷ್ಟಿಯಿಂದ ನೋಡಿದರೆ ಹಾಸ್ಯ ಹುಟ್ಟುತ್ತೆ, ಜೀವನವನ್ನೇ ವಕ್ರದೃಷ್ಟಿಯಿಂದ ನೋಡಿದರೆ ಆಧ್ಯಾತ್ಮ ಹುಟ್ಟುತ್ತೆ! "ನಗ್ತಾ ನಲಿ ಅಳ್ತಾ ಕಲಿ" ಕೃತಿಯು ಈ ಮಾತನ್ನು ನೆನಪಿಸುತ್ತದೆ.
ಗಂಗಾವತಿ ಪ್ರಾಣೇಶರ ಪಂಚುಗಳು ಅವು ಹಾಸ್ಯವೇ ಆಗಿರಲಿ, ಜೀವನ ದರ್ಶನವೇ ಆಗಿರಲಿ, ಅವರಿಗೆ ದಕ್ಕಿರುವುದು ಅವರ ಜೀವನಾನುಭವ, ಪರಿಸರ ಮತ್ತು ದೇಶ-ವಿದೇಶಗಳ ಸುತ್ತಾಟಗಳಿಂದ. ಹಾಗೆ ಕಲಿತ ಪಾಠಗಳನ್ನು ಪಾಕ ಮಾಡಿ, ಭಟ್ಟಿ ಇಳಿಸಿಕೊಂಡು, ಗುಳಿಗೆ ಗುಳಿಗೆಯಾಗಿ ತಮ್...