'ನಾಗಮಂಡಲ' ನಾಟಕವು ಜಾನಪದ ಕತೆಯನ್ನು ಆಧರಿಸಿ ರಚಿಸಿದ ನಾಟಕ. 'ನಾಗಮಂಡಲ'ದ ನಾಯಕಿ ರಾಣಿ. ಅವಳ ಪತಿ ಅಪ್ಪಣ್ಣ. ಪತಿಯನ್ನು ಒಲಿಸಿಕೊಳ್ಳಲು ಬೇರಿನ ಸಾರು ತಯಾರಿಸುವ ರಾಣಿ ಅದು ಒಡೆದು ಹಾಳಾದದ್ದನ್ನು ನೋಡಿ ಸಮೀಪದ ಹುತ್ತಕ್ಕೆ ಸುರಿಯುತ್ತಾಳೆ. ಅಲ್ಲಿನ ನಾಗ ಅವಳ ಮೇಲೆ ಮನಸೋತು ಪತಿಯ ವೇಷದಲ್ಲಿ ಮನೆಯೊಳಗೆ ಬಂದು ರಾಣಿಯೊಡನೆ ಸರಸ-ಸಲ್ಲಾಪ ನಡೆಸುತ್ತಾನೆ. ಅವಳು ಗರ್ಭಿಣಿಯಾದದ್ದನ್ನು ಕೇಳಿ ಕೋಪಗೊಳ್ಳುವ ಪತಿ ತನ್ನ ಹೆಂಡತಿಯ ಮೇಲೆ ಆರೋಪ ಹೊರಿಸುತ್ತಾನೆ. ನಾಗದಿವ್ಯದ ಮೂಲಕ ಸತ್ಯ ಸಾರುವ ರಾಣಿ ಜನಮ...