'ನವಕರ್ನಾಟಕ ಕಿರಿಯರ ಕಥಾಮಾಲೆ'ಯಲ್ಲಿ ಪ್ರಕಟವಾಗಿರುವ ಜಾಣ ಕಥೆಗಳು, ವಿವಿಧ ಲೇಖಕರ ಆಯ್ದ ಉತ್ತಮ ಕಥೆಗಳ ಆಡಿಯೋ ಪುಸ್ತಕ. ಈ ಎಲ್ಲ ಕಥೆಗಳು ಸರಳ ಶೈಲಿಯಲ್ಲಿದ್ದು ಮಕ್ಕಳನ್ನು ಆಕರ್ಷಿಸುತ್ತವೆ, ಕುತೂಹಲ ಕೆರಳಿಸುತ್ತವೆ, ಮನರಂಜನೆ ನೀಡುತ್ತವೆ, ನಕ್ಕು ನಲಿಸುತ್ತವೆ. ಹಿರಿಯರಿಂದ 'ನೀನು ಜಾಣ ಅಥವಾ ಜಾಣೆ' ಎನ್ನಿಸಿಕೊಳ್ಳಲು ಮಕ್ಕಳು ಹಂಬಲಿಸುವುದು ಸಹಜವಾದುದು. ಸದಾ ಮಕ್ಕಳ ಮೇಲೆ ಸಿಡಿಮಿಡಿಗೊಳ್ಳುವ ತಂದೆ ತಾಯಿಯರು, ಮಕ್ಕಳು ನಿಜವಾದ ಜಾಣತನ ಪ್ರದರ್ಶಿಸಿದಾಗಲಾದರೂ, ತಮ್ಮ ಜಿಪುಣತನ ಬಿಟ್ಟು ಮಕ್ಕ...