ಪ್ರಖ್ಯಾತ ಲೇಖಕರಾದ ಎಸ್. ಎಲ್. ಭೈರಪ್ಪನವರ 'ಕವಲು' ಕಾದಂಬರಿಯು ಪ್ರಸ್ತುತ ದಿನಮಾನಗಳಲ್ಲಿ ಮಹಿಳಾ ಪರ ಕಾನೂನುಗಳ ದುರುಪಯೋಗ, ಮಹಿಳಾ ಮಣಿಗಳ ಹೋರಾಟದ ರೀತಿ, ಆಧುನಿಕ ಮಹಿಳಾವಾದದ ಕಾರಣ ಛಿದ್ರವಾಗುತ್ತಿರುವ ಭಾರತೀಯ ಕೌಟುಂಬಿಕ ವ್ಯವಸ್ಥೆಗಳ ಬಗ್ಗೆ ಕವಲಿನಲ್ಲಿ ಚೆನ್ನಾಗಿ ಮನಸ್ಸಿಗೆ ನಾಟುವಂತೆ ಚಿತ್ರಿತವಾಗಿದೆ. ಮುಖ್ಯವಾಗಿ ಎರಡು ಮಧ್ಯಮ ವರ್ಗದ ಉನ್ನತ ಕೆಲಸದಲ್ಲಿರುವ ಕುಟುಂಬಗಳಲ್ಲಿ ಉಂಟಾಗುವ ತಲ್ಲಣಗಳ ಬಗ್ಗೆ ಕವಲಿನಲ್ಲಿ ವಿಸ್ತೃತವಾಗಿ ಚಿತ್ರಿತವಾಗಿದೆ. ಕಾದಂಬರಿಯ ಪ್ರಮುಖ ಪಾತ್ರಧಾರಿಯಾದ ...