ಸೋನಿ ಶಕೀಲಾನ ಮಗಳು. ವಯಸ್ಸು ಮೂರು ವರ್ಷ. ಶಕೀಲಾ ವೇಶ್ಯೆಯೇ. ದಿನಾಲು ಮೂರು-ನಾಲ್ಕು-ಆರು ಹೀಗೆ ಸಿಕ್ಕಷ್ಟು ಗಿರಾಕಿಗಳನ್ನು ಸ್ವೀಕರಿಸುತ್ತಾಳೆ....
ನಮ್ಮ ದೇಶದ ಕೋಟ್ಯಂತರ ಹೆಣ್ಣು ಮಕ್ಕಳ ಬದುಕು ಇನ್ನೂ ರೌರವವಾಗಿದ್ದು ರುದ್ರ ಭಯಾನಕವಾಗಿದೆ. ಅಂಥ ಒಂದು ಕಥಾನಕ ಮರಾಠಿಯಲ್ಲಿ ಭಿನ್ನ ಎಂಬ ಹೆಸರಿನ ಕಾದಂಬರಿಯಲ್ಲಿ ಮೂಡಿ ಬಂದಿದೆ. ಅದನ್ನು ಅಲ್ಲಿ ಬರೆದಿರುವವರು ಕವಿತಾ ಮಹಾಜನ್. ಇಂಥ ಮಹತ್ವದ ಕೃತಿಯನ್ನು ಖ್ಯಾತ ಕತೆಗಾರ್ತಿ ವೀಣಾ ಶಾಂತೇಶ್ವರಕನ್ನಡಕ್ಕೆ ತಂದಿದ್ದಾರೆ.